== ಇತಿಹಾಸ == ಶ್ರೀ ಚನ್ನಕೇಶವ ದೇವಾಲಯವು ಕರ್ನಾಟಕದ ಸೋಮನಾಥಪುರ ಪಟ್ಟಣ ದಲ್ಲಿದೆ. ಇದು ಕನ್ನಡದ ಮೇರು ದೊರೆಗಳಾದ ಹೊಯ್ಸಳರ ಕಾಲದ ಶಿಲ್ಪಕಲೆಯ ಬೀಡಾಗಿದೆ.೧೨೬೮ರಲ್ಲಿ ಹೊಯ್ಸಳ ದೊರೆ ಮೂರನೇ ನರಸಿಂಹ ಅವರಿಂದ ಕಟ್ಟಲ್ಪಟ್ಟಿತು. ಅದು ದಕ್ಷಿಣ ಭಾರತದಲ್ಲಿ ಹೊಯ್ಸಳ ಸಾಮ್ರಾಜ್ಯ ವಿಜ್ರಂಭಣೆಯಿಂದ ನಡೆಯುತ್ತಿದ್ದ ಸಮಯವಾಗಿತ್ತು.